ಗುರುಮಠಕಲ್–ಮುಂಬಯಿ ನೂತನ ಬಸ್ ಸಂಚಾರ ಆರಂಭ
===============
ಯಾದಗಿರಿ, ಅಕ್ಟೋಬರ್.04: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಯಾದಗಿರಿ ವಿಭಾಗದ ಗುರುಮಠಕಲ್ ಘಟಕದಿಂದ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ದಿನಾಂಕ: 03-10-2026 ರಿಂದ ಗುರುಮಠಕಲ್–ಮುಂಬಯಿ ನೂತನ ಬಸ್ ಅನುಸೂಚಿಯನ್ನು ಪ್ರಾರಂಭಿಸಲಾಗುತ್ತಿದೆ.
ಸಂಚಾರದ ಸಮಯ ಹಾಗೂ ಮಾರ್ಗ ವಿವರ: ಗುರುಮಠಕಲ್ನಿಂದ ಹೊರಡುವ ಸಮಯ ಮಧ್ಯಾಹ್ನ 14:00 (2:00), ಮುಂಬಯಿ ತಲುಪುವ ಸಮಯ ಬೆಳಿಗ್ಗೆ 06:30, ಮುಂಬಯಿಯಿAದ ಹೊರಡುವ ಸಮಯ ಮಧ್ಯಾಹ್ನ 14:45 (2:45), ಗುರುಮಠಕಲ್ ತಲುಪುವ ಸಮಯ ಬೆಳಿಗ್ಗೆ 07:15 ಆಗಿರುತ್ತದೆ.
ಈ ಬಸ್ಸು ಗುರುಮಠಕಲ್, ಸೇಡಂ, ಕಲಬುರಗಿ, ಆಳಂದ, ಸೋಲಾಪೂರ, ಪೂನಾ ಮಾರ್ಗವಾಗಿ ಮುಂಬಯಿ ತಲುಪಲಿದೆ. ಮರಳಿ ಬರುವಾಗಲೂ ಇದೇ ಮಾರ್ಗದಲ್ಲಿ ಗುರುಮಠಕಲ್ಗೆ ಆಗಮಿಸಲಿದೆ.
Yadgir, Yadgir | Oct 4, 2026