ಎಲ್ಲಾ ಸಾರ್ವಜನಿಕರು ಆದಷ್ಟೂ ಭೇಗನೇ ಎಸ್‌ಐಆರ್ ಅರ್ಜಿಗಳನ್ನು ಭರ್ತಿ ಮಾಡಿ ನೀಡಿ : ಶಾಸಕ ತುನ್ನೂರ
ಯಾದಗಿರಿ : ಈಗಾಗಲೇ ಕರ್ನಾಟಕದಲ್ಲಿ ನಡೆಯುತ್ತಿರುವ ಚುನಾವಣಾ ಆಯೋಗದ ವಿಶೇಷ ಮತದಾರರ ಪರಿಸ್ಕರಣೆ ಪ್ರಕ್ರೀಯೆ ನಡೆಯುತ್ತಿದು, ಕಾರಣ ಜನರು ನಿಗಧಿತ ಅವಧಿಯೊಳಗೆ ತಮ್ಮ ಮಾಹಿತಿಗಳನ್ನು ಒಳಗೊಂಡ ಅರ್ಜಿಗಳನ್ನು ಆದಷ್ಟೂ ಭೇಗನೇ ಭರ್ತಿ ಮಾಡಿ ನಿಗಧಿತ ಅವಧಿಯೊಳಗೆ ಅಧಿಕಾರಿಗಳಿಗೆ ನೀಡಬೇಕು ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಮನವಿ ಮಾಡಿದರು.
ನಗರದ ತಮ್ಮ ನಿವಾಸದಲ್ಲಿ ತಮ್ಮ ಮತದಾರರ ಪರಿಸ್ಕರಣೆಯ ಅರ್ಜಿಯನ್ನು ಭರ್ತಿಮಾಡಿ, ಅಧಿಕಾರಿಗಳಿಗೆ ನೀಡಿ, ಮಾತನಾಡಿದ ಅವರು, ಜನರು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಚುನಾವಣಾ ಸಿಬ್ಬಂಧಿಗಳು ನೀಡಿರುವ ಅರ್ಜಿಗಳನ್ನು ಸರಿಯಾಗಿ ಭರ್ತಿಮಾಡಿ, ಸಕಾಲಕ್ಕೆ ನೀಡಿದಲ್ಲಿ ನಿಮಗೂ ಅನುಕೂಲವಾಗಲಿದೆ ಎಂದು ತಿಳಿಸಿದರು.
Yadgir, Yadgir | Aug 4, 2026