ವಿರಾಜಪೇಟೆ: ಹಾಳಾದ ರಸ್ತೆ: ಬೆಟ್ಟಗೇರಿ-ಅವಂದೂರು ಗ್ರಾಮಸ್ಥರಿಂದ ಶ್ರಮದಾನ!
ಬೆಟ್ಟಗೇರಿ-ಅವಂದೂರು-ಚೇರಂಬಾಣೆ ಮುಖ್ಯ ರಸ್ತೆ ಸಂಪೂರ್ಣ ಹದಗೆಟ್ಟಿದೆ. ಶಾಲಾ ವಾಹನಗಳು ಹಾಗೂ ಸಾರ್ವಜನಿಕರ ಸಂಚಾರಕ್ಕಾಗಿ ಗ್ರಾಮಸ್ಥರು ಸ್ವತಃ ಶ್ರಮದಾನ ಮಾಡಿ ತಾತ್ಕಾಲಿಕ ರಿಪೇರಿ ಕೈಗೊಂಡಿದ್ದಾರೆ. ಕೂಡಲೇ ರಸ್ತೆ ದುರಸ್ತಿ ಮಾಡುವಂತೆ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.