ಕಮಲಾಪುರ: ಅವರಾದ್(ಬಿ) ಗ್ರಾಮದ ಬಳಿ ಭೀಕರ ಸರಣಿ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ
ಕಲಬುರಗಿ : ಬೈಕ್ ಮತ್ತು ಕಾರಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳಸಲ್ಲೆ ನಾಲ್ವರು ದುರ್ಮರಣಕ್ಕಿಡಾದ ಘಟನೆ ಕಲಬುರಗಿ ತಾಲೂಕಿನ ಅವರಾದ್(ಬಿ) ಗ್ರಾಮದ ಬಳಿ ನ7 ರಂದು ರಾತ್ರಿ 7 ಗಂಟೆಗೆ ಸಂಭವಿಸಿದೆ. ಬೈಕ್ ಮತ್ತು ಕಾರಿಗೆ ಟ್ಯಾಂಕರ್ ಡಿಕ್ಕಿಯಾಗಿ ಬೈಕ್ ಸವಾರಾದ ನಾಗೇಂದ್ರಪ್ಪ ಮತ್ತು ಶಿವಕುಮಾರ್ ಮೂಲಗೆ ಮೃತ ಬೈಕ್ ಸವಾರರಾಗಿದ್ದಾರೆ.. ಇನ್ನೂ ಕಾರಿನಲ್ಲಿದ್ದ ಇಬ್ಬರು ಸಹ ಸಾವನ್ನಪ್ಪಿದಾರೆ.. ಸರಣಿ ಅಪಘಾತದಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಟ್ರಾಫಿಕ್ ಜಾಮ್ ಆಗಿದೆ. ಸ್ಥಳಕ್ಕೆ ಸಂಚಾರಿ ಠಾಣೆ-2 ಪೊಲೀಸರು ಭೇಟಿ ನೀಡಿದ್ದಾರೆ.