ಸೇಡಂ: ಡೆತ್ನೋಟ್ ಬರೆದಿಟ್ಟು ಮಳಖೇಡ ಗ್ರಾಮದ ಗ್ರಂಥಾಲಯದಲ್ಲೆ ಪಾಲಕಿ ಆತ್ಮಹತ್ಯೆ: ಯಾಕೆ ಗೋತ್ತಾ?
ಕಲಬುರಗಿ : ಡೆತ್ನೋಟ್ ಬರೆದಿಟ್ಟು ಗ್ರಂಥ ಪಾಲಕಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಲಬುರಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಮ ಪಂಚಾಯತಿಯ ಗ್ರಂಥಾಲಯದಲ್ಲಿ ಅ13 ರಂದು ಮಧ್ಯಾನ 12 ಗಂಟೆಗೆ ಸಂಭವಿಸಿದೆ.. ಕಳೆದ ಆರು ತಿಂಗಳನಿಂದ ವೇತನ ಇಲ್ಲದೇ ಗ್ರಂಥಪಾಲಕಿ ಭಾಗ್ಯಶ್ರೀ, ಕುಟುಂಬ ನಿರ್ವಹಣೆಗಾಗಿ ಸಾಕಷ್ಟು ಪರದಾಟ ನಡೆಸ್ತಿರೋ ಮಧ್ಯೆ ಇಂದು ತಾನು ಕೆಲಸ ಮಾಡ್ತಿದ್ದ ಗ್ರಂಥಾಲಯದಲ್ಲೆ ವೆಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.. ಈ ಬಗ್ಗೆ ಮಳಖೇಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ