ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಹೆಬ್ಬಾಳ ಫ್ರೈ ಓವರ್ ಜಂಕ್ಷನ್ ನಿಂದ ತುಮಕೂರು ರಸ್ತೆ ಗುರುಗುಂಟೆಪಾಳ್ಯ ಸಿಗ್ನಲ್ ವರೆಗೆ ಉತ್ತರ ನಗರ ಪಾಲಿಕೆ ವ್ಯಾಪ್ತಿಗೆ ಬರುವ ಗಡಿಗಳು ಮತ್ತು ವಾರ್ಡ್ ಗಳನ್ನು ಗುರುತಿಸಿಕೊಂಡು ತಪಾಸಣೆ ಕೈಗೊಂಡ ವೇಳೆ ಭದ್ರಪ್ಪ ಬಡಾವಣೆಯಿಂದ ಹೊರ ವರ್ತುಲ ರಸ್ತೆಯ ಪಾದಚಾರಿ ಮಾರ್ಗ ಹಾಗೂ ಸರ್ವಿಸ್ ರಸ್ತೆಯ ಮೇಲೆ ಕೆಲವು ಸ್ಥಳಗಳಲ್ಲಿ ಕಟ್ಟಡ ಅವಶೇಷಗಳು ಮತ್ತು ಮಣ್ಣು ಕಂಡುಬಂದಿದ್ದು, ಹಾಲಿ ಬಿಸ್ಮೈಲ್ ವತಿಯಿಂದ ಕಾಮಗಾರಿ ಕಾರ್ಯ ಪ್ರಗತಿಯಲ್ಲಿರುವುದನ್ನು ಗಮನಿಸಿದ ನಗರ ಪಾಲಿಕೆ ಆಯುಕ್ತರಾದ ಪೊಮ್ಮಲ ಸುನೀಲ್ ಕುಮಾರ್ ರವರು ತಕ್ಷಣ ಅನುಪಯುಕ್ತ ಡೆಬ್ರಿಸ್ ಗಳನ್ನು ತೆರವುಗೊಳಿಸುವಂತೆ ಬಿಸ್ಮೈಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.