ಐತರಾಸನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟನೆ ಕೋಲಾರ: ಅಭಿವೃದ್ಧಿ ಸದಾ ಕಾರ್ಯರೂಪದಲ್ಲಿದ್ದಾಗ ಮಾತ್ರ ಪ್ರತಿ ಹಳ್ಳಿ ಪ್ರಗತಿಯತ್ತ ಹೆಜ್ಜೆ ಇಡಲು ಸಾಧ್ಯ ಎಂದು ಶಾಸಕ ವೆಂಕಟಶಿವಾರೆಡ್ಡಿ ಹೇಳಿದರು. ಶುಕ್ರವಾರ ಮಧ್ಯನ 1 ಗಂಟೆಯಲ್ಲಿ ಅವರು ತಾಲ್ಲೂಕಿನ ಐತರಾಸನಹಳ್ಳಿ ಗ್ರಾಮ ಪಂಚಾಯಿತಿ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದರು. ಪ್ರತಿ ಗ್ರಾಮದ ಅಭಿವೃದ್ಧಿ ಆಯಾ ಕ್ಷೇತ್ರದ ಕ್ರಿಯಾಶೀಲ ಕಾರ್ಯಕರ್ತರಿಂದ ಮಾತ್ರ ಸಾಧ್ಯ. ಒಬ್ಬ ಜನಪ್ರತಿನಿಧಿಯಾದವನು ಯಾವುದೇ ಬೇಧಭಾವವಿಲ್ಲದೆ ನ್ಯಾಯಸಮ್ಮತ ಹಾಗೂ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದರೆ ಜನರು ಸದಾ ಸ