ಬೈಕ್ ಸವಾರನ ಮೇಲೆರಗಿದ ಕ್ಯಾಂಟರ್, ಸವಾರ ಸಾವು, ಭೀಕರ ಅಪಘಾತದ ದೃಶ್ಯ ಸೆರೆ... ನೆಲಮಂಗಲ: ನೆನ್ನೆ ನೆಲಮಂಗಲ ಹೊರವಲಯ ಮಾಕಳಿ ಬಳಿ ಬೈಕ್ಗೆ ಕ್ಯಾಂಟರ್ ವಾಹನ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕ್ಯಾಂಟರ್ ವಾಹನ ಚಕ್ರಕ್ಕೆ ಸಿಲುಕಿ ಸಾವನ್ನಪ್ಪಿದ್ದು, ಅದರ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಬೆಂಗಳೂರು ಉತ್ತರ ತಾಲ್ಲೂಕು ದಾಸನಪುರದ ಮುನೇಶ್ವರ ಬಡಾವಣೆ ನಿವಾಸಿ ಶೇಖರ್ ಪೂಜಾರಿ 58 ವರ್ಷ ಮೃತ ಬೈಕ್ ಸವಾರ ಮೃತಪಟ್ಟಿದ್ದು, ಮೂಲತಃ ಉಡುಪಿಯವರು ಎನ್ನಲಾಗಿದೆ. ಘಟನೆ ಬಳಿ ಕ್ಯಾಂಟರ್ ಚಾಲಕ ವಾಹನವನ್ನ ನಿಲ್ಲಿಸದೇ ಪರಾರಿಯಾಗಿದ್ದು, ಹಿಟ್ ಅಂಡ್ ರನ್ ಪ್ರಕರಣ