ಕೋಲಾರ: ಗ್ರಾಹಕರ ಸೋಗಿನಲ್ಲಿ 6 ಲಕ್ಷರೂ ಮೌಲ್ಯದ ಚಿನ್ಬದ ಸರ ಕಳವು ಮಹಿಳಾ ಆರೋಪಿಗಳನ್ನು ಬಂಧಿಸಿದ ನಗರ ಪೊಲೀಸರು
Kolar, Kolar | Oct 10, 2025 ಗ್ರಾಹಕರ ಸೋಗಿನಲ್ಲಿ ಸುಮಾರು 6 ಲಕ್ಷ ರೂ ಮೌಲ್ಯದ ಚಿನ್ನದ ಸರ ಕಳವು, ಇಬ್ಬರು ಮಹಿಳಾ ಆರೋಪಿಗಳನ್ನು ಕೋಲಾರ ನಗರ ಪೊಲೀಸರು ಬಂಧಿಸಿದ್ದಾರೆ.ಕೋಲಾರ ನಗರದ ಎಂ.ಜಿ. ರಸ್ತೆಯಲ್ಲಿರುವ ರಾಜೇಶ್ ಜ್ಯೂವೆಲ್ಲರ್ಸ್‌ನಲ್ಲಿ ಇಬ್ಬರು ಮಹಿಳೆಯರು ಗ್ರಾಹಕರ ಸೋಗಿನಲ್ಲಿ ಮಳಿಗೆಗೆ ಬಂದು, ಪರಿಶೀಲನೆ ಮಾಡುವ ನೆಪದಲ್ಲಿ ಚಿನ್ನದ ಸರವನ್ನು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಘಟನೆ ಸಿ.ಸಿ.ಟಿ.ವಿ. ದೃಶ್ಯಗಳಲ್ಲಿ ದಾಖಲಾಗಿತ್ತು. ಈ ವಿಚಾರವಾಗಿ ರಾಜೇಶ್ ಜ್ಯೂವೆಲ್ಲರ್ಸ್‌ನ ಮಾಲೀಕರಾದ ಶ್ರೀ ಆನಂದಕುಮಾರ್‌ರವರು ದಿನಾಂಕ 08/10/2025 ರಂದು ಕೋಲಾರ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಿ, ಆರೋಪಿಗಳನ್ನು ಬಂದಿಸಿದ್ದರಾಎ