ಶ್ರೀನಿವಾಸಪುರ: ಶ್ರೀನಿವಾಸಪುರ ಬಂದ್ ಉತ್ತಮ ಪ್ರತಿಕ್ರೀಯೆ
ಶ್ರೀನಿವಾಸಪುರ ಬಂದ್ ಉತ್ತಮ ಪ್ರತಿಕ್ರೀಯೆ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಬಿ.ಆರ್. ಗವಾಯಿ ರವರ ಮೇಲೆ ನ್ಯಾಯಾಲಯದ ಕಲಾಪದ ವೇಳೆ ರಾಕೇಶ್ ಕಿಶೋರ್ ಎಂಬ ವಕೀಲ ಶೂ ಎಸೆದಿರುವುದನ್ನ ಖಂಡಿಸಿ ಇಂದು ಕೋಲಾರ ಜಿಲ್ಲೆಯಾದ್ಯಂತ ಸ್ವಯಂ ಪ್ರೇರಿತ ಬಂದಿಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಶ್ರೀನಿವಾಸಪುರ ತಾಲೂಕಿನಲ್ಲಿ ಬಂದ್ ಗೆ ಉತ್ತಮ ಪ್ರತಿಕ್ರಿಯೆ ದೊರೆತು ಬಂದ್ ಶುಕ್ರವಾರ ಯಶಸ್ವಿಯಾಗಿದೆ. ಶೂ ಎಸೆದಿರುವ ಪ್ರಕರಣ ಅತೀ ಗಂಭೀರವಾದ ವಿಚಾರದ ಜೊತೆಗೆ ಅಕ್ಷರಸ್ಥರಾಗಿರುವ ವಕೀಲರೇ ಈ ರೀತಿ ನಡೆದುಕೊಂಡರೆ ಇನ್ನೂ ಅನಕ್ಷರಸ್ಥರಿಗೆ ಪ್ರಜಾಪ್ರಭುತ್ವದಲ್ಲಿನ ಬಡವರಿಗೆ ನ್ಯಾಯ ಕೊಡಿಸುವವರು ಯಾರು ಎಂಬುದು ಸಾರ್ವಜನಿಕ ಚರ್ಚೆಯ ವಿಚಾರವಾಗಿದೆ ಎಂದು ಘಟನೆಯ ಬಗ್ಗೆ ವಿಷಾದ ವ್ಯಕ್ತಪಡಿ