ಜಮಖಂಡಿ: ನಗರದಲ್ಲಿ ಎಲ್ಲರ ಗಮನ ಸೆಳದ ಗಣವೇಷಧಾರಿಗಳ ಆಕರ್ಷಕ ಪಥಸಂಚಲನ
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದಲ್ಲಿ ಎಲ್ಲರ ಗಮನ ಸೆಳೆದ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಗಣ ವೇಷಧಾರಿಗಳ ಆಕರ್ಷಕ ಪಥಸಂಚಲನ.ನಗರದ ಪ್ರಮುಖ ಬೀದಿಗಳಲ್ಲಿ ಜರುಗಿದ ಪಥಸಂಚಲನಕ್ಕೆ ಸಾರ್ವಜನಿಕರು ಪುಷ್ಪಾರ್ಚನೆ ಮಾಡುವುದರ ಮೂಲಕ ಗಣವೇಷಧಾರಿಗಳನ್ನ ಹುರಿದುಂಬಿಸಿದರು.ರಸ್ತೆಯ ಇಕ್ಕೆಲಗಳಲ್ಲಿ ನಿಂತ ದೇಶಭಕ್ತರ ವೇಷ ಭೂಷಣ ತೊಟ್ಟ ಪುಟಾಣಿಗಳು ಗಣವೇಷಧಾರಿಗಳ ಉತ್ಸಾಹವನ್ನ ಇಮ್ಮಡಿಗೊಳಿಸಿದರು.