ಬೆಂಗಳೂರು ಉತ್ತರ: ನಾಗಸಂದ್ರದ ಬೆಲ್ಮಾರ್ ಲೇಔಟ್ ಹೆಬ್ಬಾಗಿಲು ಉದ್ಘಾಟಿಸಿದ ಶೋಭಾ ಕರಂದ್ಲಾಜೆ
ಬೆಂಗಳೂರು ನಗರದ ನಾಗಸಂದ್ರದ ಬೆಲ್ಮಾರ್ ಲೇಔಟ್‌ನಲ್ಲಿ ಇಂದು ‘ಬೆಲ್ಮಾರ್ ಲೇಔಟ್ ಹೆಬ್ಬಾಗಿಲು’ ಉದ್ಘಾಟನಾ ಸಮಾರಂಭವು ನಡೆಯಿತು. ಕೇಂದ್ರ ಸಚಿವೆ ಶ್ರೀಮತಿ ಶೋಭಾ ಕರಂದ್ಲಾಜೆ ಅವರು ಹೆಬ್ಬಾಗಿಲನ್ನು ಅಧಿಕೃತವಾಗಿ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ದಾಸರಹಳ್ಳಿಯ ಶಾಸಕರಾದ ಶ್ರೀ ಎಸ್. ಮುನಿರಾಜು ಅವರು, ಮಾಜಿ ಶಾಸಕರಾದ ಶ್ರೀ ಮುನಿಸ್ವಾಮಿ ಅವರು, ಮಾಜಿ ಬಿಬಿಎಂಪಿ ಸದಸ್ಯರಾದ ಶ್ರೀಮತಿ ಸರ್ವಮಂಗಳ ಸಿ.ಎಂ. ನಾಗರಾಜು ಅವರು ಹಾಗೂ ಬೆಲ್ಮಾರ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ಮತ್ತು ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.