ಕೊಳ್ಳೇಗಾಲ: ತಾಲೂಕಿನ ಮೂಳ್ಳೂರು ಗ್ರಾಮದಲ್ಲಿ ಯುವತಿನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿದ್ದ ಪಾರ್ವತಿ ಎಂಬ ಮಹಿಳೆ ಕಾರಣವಿಲ್ಲದೇ ಮನೆಬಿಟ್ಟು ಹೊರಗೆ ಹೋಗಿ ಬಳಿಕ ಮರಳಿ ಮನೆಗೆ ಬಾರದ ಹಿನ್ನೆಲೆ ಕುಟುಂಬವು ಆತಂಕಕ್ಕೊಳಗಾಗಿದೆ. ಸೊಸೆ ಪಾರ್ವತಿಯನ್ನು ಮನೆಯ ಸುತ್ತಮುತ್ತ ಹಾಗೂ ಬಂಧುಬಳಗದ ಮನೆಗಳಲ್ಲಿಯೂ ಹುಡುಕಿದರೂ ಸುಳಿವು ಸಿಗದ ಕಾರಣ, ಆಕೆಯ ಅತ್ತೆ ಕೊಳ್ಳೇಗಾಲ ಗ್ರಾಮಾಂತರಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ನಾಪತ್ತೆಯಾಗಿರುವ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹುಡುಕಾಟ ಪ್ರಾರಂಭಿಸಿದ್ದಾರೆ.