ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ಮೇಲೆ ಕಾನೂನು ಕ್ರಮ ಜರುಗಿಸಲು ನಗರದಲ್ಲಿ ನಮ್ಮ ಕೋಲಾರ ರೈತ ಸೇನೆ ಒತ್ತಾಯ ಕೋಲಾರ ; ಅಕ್ಟೋಬರ್,೨೮ (ಹಿ.ಸ.) ಆಂಕರ್ ; ಕೋಲಾರ ಪ್ರಾದೇಶಿಕ ವಲಯದ ನಗರ ಶಾಖೆಯ ಉಪ ವಲಯ ಅರಣ್ಯ ಅಧಿಕಾರಿ ವಿ.ಹರೀಶ್ ಅವರು ಚಾಮರಹಳ್ಳಿ ನಿವಾಸಿಯಾದ ಮುನಿಶಾಮಿರವರು ತಮ್ಮ ಜಮೀನಿನಲ್ಲಿದ್ದ ಆಲದ ಮರವನ್ನು ಕಟಾವಣೆ ಮಾಡಿ ಸಾಗಾಣೆ ಮಾಡಲು ರೈತನಿಂದ ೪೫,೦೦೦ ರೂ.ಗಳ ಲಂಚವನ್ನು ಪಡೆದಿದ್ದು, ಅವರನ್ನು ಕೂಡಲೇ ಅಮಾನತ್ತು ಮಾಡುವಂತೆ ಮಂಗಳವಾರ ನಮ್ಮ ಕೋಲಾರ ರೈತ ಸೇನೆ ವತಿಯಿಂದ ಅರಣ್ಯ ಇಲಾಖೆ ಡಿ.ಎಫ್.ಓಗೆ ಮನವಿ ನೀಡಿದರು.