ಮದ್ದೂರು: ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದ ಬಸವಪ್ಪ ಶಿವೈಕ್ಯ
Maddur, Mandya | Oct 29, 2025 ತೀವ್ರ ಅನಾರೋಗ್ಯದಿಂದ ಶಿವೈಕ್ಯವಾದ ಮದ್ದೂರು ತಾಲ್ಲೂಕು ಹನುಮಂತನಗರದ ಶ್ರೀಆತ್ಮಲಿಂಗೇಶ್ವರ ಕ್ಷೇತ್ರದ ಬಸವಪ್ಪನ ಅಂತ್ಯಕ್ರಿಯೆ ವೀರಶೈವ ಸಂಪ್ರದಾಯದ ಪ್ರಕಾರ ದೇವಾಲಯದ ಮಠದ ಈಶಾನ್ಯ ದಿಕ್ಕಿನಲ್ಲಿ ಬುಧವಾರ ನೆರವೇರಿಸಲಾಯಿತು. ಬುಧವಾರ ಬೆಳಿಗ್ಗೆ ಶಿವೈಕ್ಯವಾಗಿದ್ದ ಬಸವನ ಪಾರ್ಥಿವ ಶರೀರವನ್ನು ದೇವಾಲಯದ ಆವರಣದಲ್ಲಿರುವ ಮಠದ ಮುಂದೆ ಈಶಾನ್ಯ ದಿಕ್ಕಿನಲ್ಲಿ ಕಾರ್ಕಹಳ್ಳಿ ಸೋಮರಾಧ್ಯ ಅವರ ನೇತೃತ್ವದಲ್ಲಿ ಅಂತ್ಯಕ್ರಿಯೆಯನ್ನು ಭಕ್ತಾಧಿಗಳ ಸಮ್ಮುಖದಲ್ಲಿ ಪಂಚದ್ರವ್ಯಗಳಿಂದ ಬಸವನಿಗೆ ಅಭಿಷೇಕ ನೆರವೇರಿಸಲಾಯಿತು. ಇದಲ್ಲದೆ 250 ಕೆ.ಜಿ ಉಪ್ಪು, ಎಣ್ಣೆ, ತುಪ್ಪ, ವಿಭೂತಿ, ಭಸ್ಮ, ತುಳಸಿ, ಬಿಲ್ವಪತ್ರೆಗಳನ್ನು ಬಸವನ ಸಮಾಧಿಯೊಳಗೆ ಹಾಕಿ ಬಸವನ ಪಾಥರ್ೀವ ಶರೀರವನ್ನು ಪಂಚಭೂತಗಳಲ್ಲಿ ಲೀನಗೊಳಿಸಲಾಯಿತು.