ಚಿಕ್ಕಮಗಳೂರು: ಅಧಿಕಾರ, ಹುದ್ದೆ ಶಾಶ್ವತವಲ್ಲ, ಕಾರ್ಯಕರ್ತನ ಸ್ಥಾನ ಮಾತ್ರ ಶಾಶ್ವತ : ಎಂಎಲ್ಸಿ ಸಿಟಿ ರವಿ ಕಿವಿಮಾತು.!
ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ನಾರಾಯಣ ಗುರು ಸಮುದಾಯ ಭವನದಲ್ಲಿ ಬಿಜೆಪಿಯ ಆಲ್ದೂರು ಮಹಾಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು. ಈ ವೇಳೆ ಮಾತನಾಡಿದ ಎಂಎಲ್ಸಿ ಸಿಟಿ ರವಿ ಯಾವುದೇ ಪಕ್ಷದಲ್ಲಿರಲಿ ಯಾವುದೇ ಅಧಿಕಾರ, ಸ್ಥಾನಮಾನ, ಹುದ್ದೆ, ಜವಾಬ್ದಾರಿಗಳು ಶಾಶ್ವತವಲ್ಲ. ಕಾರ್ಯಕರ್ತನ ಮಾತ್ರ ಶಾಶ್ವತವಾದದ್ದು ಆದ್ದರಿಂದ ಯಾರು ಕೂಡ ಯಾವುದೇ ಅಧಿಕಾರ ಹುದ್ದೆ ಸ್ಥಾನಮಾನದ ಆಕಾಂಕ್ಷೆ ಫಲಪೇಕ್ಷೆಗಳಿಲ್ಲದೆ ಕರ್ತವ್ಯವನ್ನ ನಿರ್ವಹಿಸಬೇಕು ಆಗ ಮಾತ್ರ ಯಶಸ್ಸು ಸಾಧಿಸಲು ಸಾಧ್ಯ ಎಂದು ಎಂಎಲ್ಸಿ ಸಿಟಿ ರವಿ ಕಾರ್ಯಕರ್ತರಿಗೆ ಈ ಮಾತು ಹೇಳಿದರು.