ಉಡುಪಿ: ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಕೃಷ್ಣ ಜನ್ಮಾಷ್ಟಮಿ ಹಾಗೂ ವಿಟ್ಲಪಿಂಡಿ ಉತ್ಸವ ಸಂಪನ್ನ
Udupi, Udupi | Sep 15, 2025 ಶ್ರೀಕೃಷ್ಣಾಷ್ಟಮಿಯ ಹಿನ್ನಲೆಯಲ್ಲಿ ಭಾನುವಾರ ತಡರಾತ್ರಿ 12:11ಕ್ಕೆ ಪರ್ಯಾಯ ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣದೇವರಿಗೆ ವಿಶೇಷ ಪೂಜೆ ನೆರವೇರಿಸಿ, ತುಳಸಿ ಸನ್ನಿಧಿಯಲ್ಲಿ ಚಂದ್ರನಿಗೆ ಅರ್ಘ್ಯಪ್ರಧಾನ ಮಾಡಿದರು. ಬಳಿಕ ಪುತ್ತಿಗೆ ಕಿರಿಯ ಯತಿಗಳು ಹಾಗೂ ಇತರರು ಅರ್ಘ್ಯ ಪ್ರದಾನ ಮಾಡಿದರು. ಸೋಮವಾರ ಮಧ್ಯಾಹ್ನ ವೇಳೆಗೆ ಶ್ರೀಕೃಷ್ಣನ ಮೃಣ್ಮಯ ಮೂರ್ತಿಯನ್ನು ಸ್ವರ್ಣ ರಥದಲ್ಲಿಟ್ಟು ಮೆರವಣಿಗೆ ನಡೆಸಲಾಯಿತು, ಸಾಂಪ್ರದಾಯಿಕ ವೇಷದ ಗೊಲ್ಲರು ರಥಬೀದಿಯ ಸುತ್ತಲೂ ಅಲ್ಲಲ್ಲಿ ನಿಲ್ಲಿಸಲಾಗಿದ್ದ ಗುರ್ಜಿಯಲ್ಲಿ ಕಟ್ಟಲಾಗಿದ್ದ ಮೊಸರು ಕುಡಿಕೆಗಳನ್ನು ಒಡೆಯುವ ಮೂಲಕ ಸಂಭ್ರಮಿಸಿದರು.