ಬೆಂಗಳೂರು ಉತ್ತರ: ಮಣಿಕಂಠ ರಾಥೋಡ್ ಬೆದರಿಕೆ ವಿಚಾರ; ಬಿಜೆಪಿ ಎಂಥವರಿಗೆ ಟಿಕೆಟ್ ಕೊಟ್ಟಿದ್ದಾರೆ: ನಗರದಲ್ಲಿ ಪ್ರಿಯಾಂಕ ಖರ್ಗೆ ಕಿಡಿ
ಮಣಿಕಂಠ ರಾಥೋಡ್ ಬಹಿರಂಗ ಬೆದರಿಕೆ ವಿಚಾರಕ್ಕೆ ಸಂಬಂಧಿಸಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ರೇಸ್ ಕೋರ್ಸ್ ಬಳಿ ಮಾಧ್ಯಮಗಳ ಕೊತೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು, ಇದೇನು ಹೊಸದಲ್ಲ ಮತ್ತು ಆತನ ಬೆದರಿಕೆ ಹೊಸದೇನಲ್ಲ. ಇದಕ್ಕೆ ಬಿಜೆಪಿ ಉತ್ತರ ಕೊಡಬೇಕು, ಇಂಥವರಿಗೆ ಟಿಕೆಟ್ ಕೊಟ್ಟಿದ್ರಲ್ಲ, ಕಾನೂನು ಪಾಲನೆ ಮಾಡಿ ಅಂದ್ರೆ ಬೆದರಿಕೆ ಹಾಕ್ತಾರಲ್ಲ ಇವರು, ಇಂಥವರಿಗೆ ಏನು ಹೇಳೋದು. ಚಿತ್ತಾಪುರದಲ್ಲಿ ಸಂಘಟನೆದು ಬ್ಯಾನರ್ ತೆಗೆದಿದ್ದೀವಿ ಅಂತ ಮಾತನಾಡುತ್ತಿದ್ದಾರೆ. ಹೌದು ಧ್ವಜ ಇಳಿಸಿರೋದು ನಿಜ ಅದಕ್ಕೆ ಅನುಮತಿ ಪಡೆಯಬೇಕಲ್ವಾ, ಈ ಹಿಂದೆ ನಾನು ಮಂತ್ರಿ ಆದಾಗ ನಮ್ಮ ಬೆಂಬಲಿಗರು ಪೋಸ್ಟರ್ ಹಾಕಿದ್ರು. ಕಾರ್ಪೊರೇಷನ್ ಕಮಿಷನರ್ ನಮ್ಮ ಪಕ್ಷಕ್ಕೆ ದಂಡ ವಿಧಿಸಿದರು.