ಚಿಕ್ಕಮಗಳೂರು: ಆದಿ - ಅಂತ್ಯವಿಲ್ಲದ ಧರ್ಮ ಸನಾತನ ಧರ್ಮ.! ಭಗವಂತನಿಗೆ ಆದಿಯೂ ಇಲ್ಲ ಅಂತ್ಯವೂ ಇಲ್ಲ: ನಗರದಲ್ಲಿ ಶೃಂಗೇರಿ ಕಿರಿಯ ಜಗದ್ಗುರುಗಳ ಆಶೀರ್ವಚನ.!
ಶೃಂಗೇರಿಯ ಕಿರಿಯ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತಿ ಮಹಾಸ್ವಾಮಿಗಳವರ ಅಮೃತ ಹಸ್ತದಿಂದ ಚಿಕ್ಕಮಗಳೂರು ನಗರದ ತಾಲೂಕು ಕಚೇರಿ ಆವರಣದಲ್ಲಿರುವ ಶ್ರೀ ಸಂಕಷ್ಟಹರ ಮಹಾ ಗಣಪತಿ ದೇವರ ಪುನಃ ಪ್ರತಿಷ್ಠಾಪನ ಮತ್ತು ನೂತನ ದೇವಸ್ಥಾನದ ಕುಂಭಾಭಿಷೇಕ ಸಮಾರಂಭವು ಅದ್ದೂರಿಯಾಗಿ ಜರುಗಿತು. ಜಗದ್ಗುರುಗಳು ಶ್ರೀಯವರಿಗೆ ಪಂಚಾಮೃತ ಅಭಿಷೇಕ, ವಿಶೇಷ ಪುಷ್ಪಾಲಂಕಾರ, ಅರ್ಚನೆ, ಮಹಾ ಮಂಗಳಾರತಿಯನ್ನು ವಿಧಿ ವಿಧಾನಗಳೊಂದಿಗೆ ನೆರವೇರಿಸಿದರು. ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಶೃಂಗೇರಿ ಜಗದ್ಗುರು ಶ್ರೀ ಶ್ರೀ ವಿದುಶೇಖರ ಭಾರತಿ ಶ್ರೀಗಳು ಆಶೀರ್ವಚನ ನೀಡಿದರು.