ಬೆಂಗಳೂರು ಉತ್ತರ: ಮಲ್ಲಿಕಾರ್ಜುನ ಖರ್ಗೆ ಅವರ ಆರೋಗ್ಯ ಸ್ಥಿರವಾಗಿದೆ, ಚಿಂತಿಸೋ ಅವಶ್ಯಕತೆ ಇಲ್ಲ: ನಗರದಲ್ಲಿ ಪ್ರಿಯಾಂಕ ಖರ್ಗೆ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಸ್ಪತ್ರೆಗೆ ದಾಖಲು ವಿಚಾರಕ್ಕೆ ಸಂಬಂಧಿಸಿ ಬುಧವಾರ ಸಂಜೆ 5 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಸಚಿವ ಪ್ರಿಯಾಂಕ ಖರ್ಗೆ ಅವರು, ಬಹಳಷ್ಟು ಜನ ಆತಂಕದಿಂದ ಫೋನ್ ಮಾಡುತ್ತಿದ್ದರು. ಅದಕ್ಕೆ ನಾನೇ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದೆ. ಅವರ ಆರೋಗ್ಯ ಸ್ಥಿರವಾಗಿದೆ ಯಾವುದೇ ರೀತಿಯಾದಂತಹ ಚಿಂತೆ ಮಾಡುವ ಅಗತ್ಯ ಇಲ್ಲ. ಡಾಕ್ಟರ್ ಅವರಿಗೆ ಫೇಸ್ ಮೇಕರ್ ಹಾಕಬೇಕು ಅಂತ ಹೇಳಿದ್ದಾರೆ, ಉಸಿರಾಟದ ಸಮಸ್ಯೆಯ ಕಾರಣಕ್ಕಾಗಿ ಜೊತೆಗೆ ಹೃದಯಬಡಿತ ಸ್ಥಿರವಾಗಿರಲು ಅವಶ್ಯಕತೆ ಇದೆ ಅಂತ ಹೇಳಿದ್ದಾರೆ, ಬೇರೆ ಯಾವುದೇ ರೀತಿಯಾದಂತ ತೊಂದರೆ ಇಲ್ಲ ಎಂದರು.