ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟದಲ್ಲಿ ವ್ಯತ್ಯಾಸ ಕಾಣುತ್ತಿದ್ದು, ಕಳೆದ ಮೂರು-ನಾಲ್ಕು ದಿನಗಳಿಂದ ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ ಕುಸಿಯುತ್ತಾ ಬಂದಿದೆ. ಇಂದು ಬೆಂಗಳೂರಿನಲ್ಲಿ ಗಾಳಿಯ ಗುಣಮಟ್ಟ 168ಕ್ಕೆ ತಲುಪಿದೆ, ಇದು ಕಳಪೆ ಮಟ್ಟದಲ್ಲಿದೆ. ಕಳೆದ ಶನಿವಾರ ಇದು 206ಕ್ಕೆ ಇಳಿದಿತ್ತು. ಇದೀಗ ಬಳ್ಳಾರಿಯಲ್ಲಿಯೂ ಗಾಳಿಯ ಗುಣಮಟ್ಟ AQI 173ಕ್ಕೆ ಕುಸಿದಿದ್ದು, ಬೆಂಗಳೂರಿನನ್ನೂ ಮೀರಿಸಿದೆ. ಬಳ್ಳಾರಿಯಲ್ಲಿ ವಾಯು ಮಾಲಿನ್ಯ ಮತ್ತು ಕಳಪೆ ರಸ್ತೆಗಳು ಈ ಪರಿಸ್ಥಿತಿಗೆ ಕಾರಣ ಎಂದು ಹೇಳಲಾಗಿದೆ. ತಜ್ಞರ ಪ್ರಕಾರ, ಇದೇ ರೀತಿ ಮುಂದುವರಿದರೆ ಬಳ್ಳಾರಿಯ ಪರಿಸ್ಥಿತಿ ದೆಹಲಿಯಂತೆ ಹದಗೆಡಲಿದೆ. ಎಂಬ ಮಾಹಿತಿ ಡಿ.15,ಸೋಮವಾರ ಬೆಳಿಗ್ಗೆ 11ಕ್ಕೆ ತಿಳಿದುಬಂದಿದೆ.