ಬೆಂಗಳೂರು ಉತ್ತರ: 5 ವರ್ಷ ಸಿದ್ದರಾಮಯ್ಯ ಅವರೇ ಸಿಎಂ, ಚರ್ಚೆ ಬೇಡ: ನಗರದಲ್ಲಿ ಸತೀಶ್ ಜಾರಕಿಹೊಳಿ
ನವೆಂಬರ್ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿ ಸಚಿವ ಸತೀಶ್ ಜಾರಕಿಹೊಳಿ ಅವರು, ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಿವಾನಂದ ಸರ್ಕಲ್ ಬಳಿ ಮಾಧ್ಯಮಗಳ ಜೊತೆ ಮಾತನಾಡಿ, ಇಬ್ಬರು ಮಂತ್ರಿಗಳು ಒಂದೇ ಪಕ್ಷದವರು, ಹಾಗಾಗಿ ಇಬ್ಬರು ಚರ್ಚೆ ಮಾಡಿರ್ತಾರೆ ಇದಕ್ಕೆ ತಪ್ಪು ಸರಿ ವ್ಯಾಖ್ಯಾನ ಬೇಡ ಏನೇನ್ ಆಗುತ್ತೋ ಕಾದು ನೋಡೋಣ ತಕ್ಷಣ ಯಾವುದೂ ತೀರ್ಮಾನ ಮಾಡೋಕೆ ಆಗಲ್ಲ ಸಿಎಂ ನಿನ್ನೆ ಹೇಳಿದ್ದಾರೆ 5 ವರ್ಷ ಇರ್ತೀನಿ ಅಂತ, ಈಗ ನಾವು ಆ ಬಗ್ಗೆ ಚರ್ಚೆ ಮಾಡೋದು ಬೇಡ ಎಂದರು.