ಬೆಂಗಳೂರು ಉತ್ತರ: ತಮಿಳುನಾಡು ಕಾಲ್ತುಳಿತ ಪ್ರಕರಣ; ನಮ್ಮ ಎಂಪಿಗಳು, ಪಕ್ಷದವರು ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ: ನಗರದಲ್ಲಿ ಮಲ್ಲಿಕಾರ್ಜುನ ಖರ್ಗೆ
ತಮಿಳುನಾಡು ಕಾಲ್ತುಳಿತ ದುರ್ದೈವ ಘಟನೆಗೆ ಸಂಬಂಧಿಸಿ, ಮಲ್ಲಿಕಾರ್ಜುನ್ ಖರ್ಗೆ ಅವರು ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ದೆಹಲಿಗೆ ತೆರಳುವ ಮುನ್ನಾ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಈ ರೀತಿಯ ಘಟನೆಗಳು ಆಗಬಾರದು,ಮಕ್ಕಳು, ಹೆಣ್ಮಕ್ಕಳು,ಪುರುಷರು ಕಾಲ್ತುಳಿತಕ್ಕೆ ತುತ್ತಾಗಿದ್ದಾರೆ ಅಲ್ಲಿನ ಸರ್ಕಾರ ಏನು ಕ್ರಮ ಕೈಗೊಳ್ಳುತ್ತೋ ನೋಡೋಣ, ನಮ್ಮ ಪಕ್ಷದ ಅಧ್ಯಕ್ಷರು, ಅಲ್ಲಿನ ಎಂಪಿಗಳು ಸ್ಥಳಕ್ಕೆ ಭೇಟಿ ಕೊಡಲು ಹೇಳಿದ್ದೇನೆ ಕೈಲಾದಷ್ಟು ಸಹಾಯ ಮಾಡುವಂತೆಯೂ ಹೇಳಿದ್ದೇನೆ, ಯಾವ ರೀತಿ ಸಹಾಯ ಅಂತ ಪಿಸಿಸಿ ಹಾಗು ಅಲ್ಲಿನ ಸಂಸದರು ಹೇಳ್ತಾರೆ ಎಂದರು.