ಕರ್ನಾಟಕ ಬ್ಯಾಡ್ ಮಿಂಟನ್ ಸಂಸ್ಥೆಯ 2025-29ರ ಸಾಲಿಗೆ ಭಾನುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಕಂಠೀರವ ಸ್ಟೇಡಿಯಂ ಬಳಿ ನಡೆದ ಚುನಾವಣೆಯಲ್ಲಿ ಮಾಜಿ ಸಚಿವ ಕುಮಾರ್ ಬಂಗಾರಪ್ಪ ಅವರ ತಂಡ ಗೆಲುವು ಸಾಧಿಸಿದ್ದು, ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಚುನಾವಣೆಯಲ್ಲಿ ಗೆದ್ದಂತ ಎಲ್ಲರಿಗೂ ಶುಭಾಷಯಗಳು. ಬ್ಯಾಡ್ಮಿಟನ್ ನಲ್ಲಿ ಯಾವೆಲ್ಲಾ ಕುಂದುಕೊರತೆಗಳು ಇದೇ ಅದರ ಬಗ್ಗೆ ಒಂದು ಪ್ರಣಾಳಿಕೆ ಸಿದ್ದ ಪಡಿಸಿದ್ದೇವೆ. ಎಲ್ಲರ ಜೊತೆ ಚರ್ಚೆ ಮಾಡಿ ಇದನ್ನ ಇನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡುತ್ತೇವೆ ಎಂದರು