ಸೋಮವಾರ ಸಂಜೆ 6 ಗಂಟೆ ಸುಮಾರಿಗೆ ಕೇಂದ್ರ ಜಿಬಿಎ ಕಚೇರಿಯಲ್ಲಿ ಅಪರ ಆಯುಕ್ತರಾದ ದಲ್ಜಿತ್ ಕುಮಾರ್ ಅವರು ಪೋನ್ ಇನ್ ಕಾರ್ಯಕ್ರಮ ನಡೆಸಿದ್ದು, ಈ ವೇಳೆ ಮಹಿಳಾ ನಾಗರೀಕರೊಬ್ಬರು ಪಾರ್ಕ್ ಸಮಯ ಬದಲಾವಣೆ ಕುರಿತು ಫೋನ್ ಇನ್ ಕಾರ್ಯಕ್ರಮದಲ್ಲಿ ಆಯುಕ್ತರಿಗೆ ಮನವಿ ಮಾಡಿದರು. ಹಾಗೂ ಕೆಂಬ್ರಿಜ್ ಲೇಔಟ್ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘದವರು ರಾಜಕಾಲುವೆ ಸಮಸ್ಯೆ ಹಾಗೂ ಇಂದಿರಾನಗರದಲ್ಲಿನ ಮೆಟ್ರೋ ಮಾರ್ಗದ ಕಟ್ಟಡ ತ್ಯಾಜ್ಯ ಸಮಸ್ಯೆ ಬಗ್ಗೆ ಆಯುಕ್ತರಿಗೆ ಅಹವಾಲನ್ನು ಸಲ್ಲಿಸಿದರು. ಇನ್ನು ಚಿಕ್ಕಪೇಟೆ ನಿವಾಸಿಯೊಬ್ಬರು ರಸ್ತೆ ಗುಂಡಿ ಸಮಸ್ಯೆ ಬಗ್ಗೆ ಆಯುಕ್ತರಿಗೆ ಅಹವಾಲನ್ನು ಸಲ್ಲಿಸಿದರು. ಮುಖ್ಯ ಅಭಿಯಂತರರು ಹಾಗೂ ಗಾಂಧಿನಗರ ಕಾರ್ಯಪಾಲಕ ಅಭಿಯಂತರರಿಗೆ ಸಮಸ್ಯೆ ಬಗೆಹರಿಸಲು ಅಪರ ಆಯುಕ್ತರು ಸೂಚಿಸಿದರು.