ಮದ್ದೂರು: ಭಾರತೀ ಎಜುಕೇಷನ್ ಟ್ರಸ್ಟ್ ವತಿಯಿಂದ ಸೆ18 ರಿಂದ 20ರವರೆಗೆ ಭಾರತೀ ಉತ್ಸವ: ಭಾರತೀನಗರದಲ್ಲಿ ಪ್ರಾಂಶುಪಾಲ ಡಾ ಎಂ ಎಸ್ ಮಹಾದೇವಸ್ವಾಮಿ
Maddur, Mandya | Sep 16, 2025 ಮದ್ದೂರು ತಾಲ್ಲೂಕು ಭಾರತೀನಗರ ಭಾರತೀ ಎಜುಕೇಷನ್ ಟ್ರಸ್ಟ್ ಕಳೆದ ಒಂದೂವರೆ ದಶಕಗಳಿಂದ ಅತ್ಯಂತ ವಿಜೃಂಭಣೆ ಮತ್ತು ವೈಭವದಿಂದ ಭಾರತೀ ಉತ್ಸವವನ್ನು ಆಯೋಜಿಸಿಕೊಂಡು ಬರಲಾಗುತ್ತಿದ್ದು, ಅದರಂತೆ 2025 ನೇ ಸಾಲಿನ ಭಾರತೀ ಉತ್ಸವವನ್ನು ಸೆ.18 ರಿಂದ 20 ರವರೆಗೆ 3 ದಿನಗಳ ಕಾಲ ಆಯೋಜಿಸಲಾಗಿದೆ ಎಂದು ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ ಅವರು ತಿಳಿಸಿದರು. ಭಾರತೀನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಡಾ.ಎಂ.ಎಸ್.ಮಹದೇವಸ್ವಾಮಿ ಅವರು ಮಂಗಳವಾರ ಸಂಜೆ 5 ಗಂಟೆಯಲ್ಲಿ ಮಾತನಾಡಿ, ಸೆ.18, 19 ಮತ್ತು 20 ರಂದು ನಡೆಯುವ ಭಾರತೀ ಉತ್ಸವದಲ್ಲಿ 3 ದಿನಗಳ ಕಾಲವು ವಿವಿಧ ಸಾಂಸ್ಕೃತಿಕ, ರಸಮಂಜರಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಹಿರಿಯ ವಿದ್ಯಾರ್ಥಿಳು ಹಾಗೂ ಸಾರ್ವಜನಿಕ