ಸುಳ್ಯ: ಸುಳ್ಯದಲ್ಲಿ ಟೈಲರ್ ಅಂಗಡಿಗೆ ನುಗ್ಗಿದ ಕಾರು
ಬೈಕ್ ಅಡ್ಡ ಬಂದ ಪರಿಣಾಮ ಇಕೋ ಕಾರು ನೇರವಾಗಿ ಸುಳ್ಯ ಅಂಬೆಟಡ್ಕದ ಅಕ್ಷಯ್ ಆರ್ಕೇಡ್ನಲ್ಲಿರುವ ಇನ್ ಸ್ಟೈಲ್ ಟೈಲರ್ ಅಂಗಡಿಗೆ ನುಗ್ಗಿದೆ. ಎನ್ನಲಾಗಿದ್ದು, ಗಾಡಿ ಬಂದ ರಭಸಕ್ಕೆ ಅಂಗಡಿ ಒಳಗಿನ ವಸ್ತುಗಳು, ಟೈಲರ್ ಮಿಷನ್, ವಸ್ತ್ರಗಳು ಸಂಪೂರ್ಣ ಹಾನಿಯಾಗಿದೆ. ಅಂಗಡಿಯ ಮಾಲಕಿ ಊಟಕ್ಕೆ ತೆರಳಿದ್ದು, ಸಿಬ್ಬಂದಿ ಅಂಗಡಿಯ ಹಿಂಭಾಗ ಇದ್ದ ಕಾರಣ ದೊಡ್ಡ ಅನಾಹುತ ತಪ್ಪಿದೆ.