ಬೆಂಗಳೂರು ಉತ್ತರ: ಬಿಜೆಪಿ 19 ಸಂಸದರು ಇಂಡಿಯಾ ಗೇಟ್ ಕಾಯೋಕೆ ಇದ್ದೀರಾ: ನಗರದಲ್ಲಿ ಪ್ರದೀಪ್ ಈಶ್ವರ್
ಶಾಸಕ ಪ್ರದೀಪ್ ಈಶ್ವರ್ ಅವರು ಮಂಗಳವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸದಾಶಿವನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಬಿಜೆಪಿ ಸರ್ಕಾರಕ್ಕೆ ರಾಜ್ಯದ ಮೇಲೆ ತುಂಬಾ ಕೋಪ ಇದೆ ಅನಿಸುತ್ತೆ. ನೈರುತ್ಯ ಮುಂಗಾರಿನಿಂದ ರಾಜ್ಯದಲ್ಲಿ ಸಾಕಷ್ಟು ಪ್ರವಾಹ ಪರಿಸ್ಥಿತಿಯಿಂದ ಹಾನಿಯಾಗಿದೆ. ನಾವೂ ಕೇಂದ್ರ SDRF ನಿಂದ ಪರಿಹಾರ ನೀಡುವಂತೆ ಕೇಳಿದ್ವೀ. ಮಹಾರಾಷ್ಟ್ರಗೆ 1556 ಕೋಟಿ ಕೊಟ್ಟಿದ್ದಾರೆ. ಕರ್ನಾಟಕಕ್ಕೆ 384 ಕೋಟಿ ಕೊಟ್ಟಿದ್ದಾರೆ. ಇದನ್ನ ದೊಡ್ಡ ಸಾಧನೆ ಅನ್ನೋ ತರ ಆರ್ ಅಶೋಕ ಟ್ವೀಟ್ ಮಾಡಿದ್ದಾರೆ. ನಾವೂ ಪರಿಹಾರದ ಬಗ್ಗೆ ಕೇಳಿದ್ರೆ ಅಶೋಕ್ ಅವರು ಕಾಂಗ್ರೆಸ್ ಸಂಸದರು ಪರಿಹಾರ ಕೇಳೋಕೆ ಹೇಳಿ ಅಂತಾರೆ. NDA ಇಂದ ಗೆದ್ದಿರುವ 19 ಸಂಸದರು ಇಂಡಿಯಾ ಗೇಟ್ ಕಾಯೋಕೆ ಇದೀರಾ ಎಂದು ಕಿಡಿಕಾರಿದರು.