ಸಿಎಂ ಡಿಸಿಎಂ ನ ಕರೆದು ಚರ್ಚೆ ಮಾಡ್ತೀವಿ ಎಂಬ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರಕ್ಕೆ ಸಂಬಂಧಿಸಿ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು ಗುರುವಾರ ಸಂಜೆ 6 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿ, ಹೈಕಮಾಂಡ್ ಕರೆದ್ರೆ ಸಿಎಂ, ಡಿಸಿಎಂ ದೆಹಲಿಗೆ ಹೋಗ್ತಾರೆ. ಯಾವ ಉದ್ದೇಶದಿಂದ ಕರೆದಿದ್ದಾರೆ ಅನ್ನೋದು ಗೊತ್ತಾಗ್ಬೇಕು. ಬಿಡೋದೋ ಕೊಟ್ಟು ಕೊಳ್ಳೋದು ಮುಂದಿನ ವಿಚಾರ, ಯಾರು ಯಾರು ಮಾತು ಕೊಟ್ಟಿದ್ದಾರೆ, ಬಿಟ್ಟಿದ್ದಾರೆ ಅನ್ನೋದು ಗೊತ್ತಿಲ್ಲ. ಅದು ನಮ್ಮ ತೀರ್ಮಾನ ಅಲ್ಲ. ಹೈಕಮಾಂಡ್ ತೀರ್ಮಾನ ಅಂತಿಮ ಅಲ್ವಾ ? ಇದರ ನಡುವೆ ಸ್ವಾಮೀಜಿಗಳ ಮಧ್ಯ ಪ್ರವೇಶ ಸೂಕ್ತ ಅಲ್ಲ, ಸ್ವಾಮಿಗಳು ಧರ್ಮ ಸುಧಾರಣೆ ಕೆಲಸದಲ್ಲಿ ಇರಬೇಕು, ರಾಜಕೀಯದಲ್ಲಿ ಮಧ್ಯ ಪ್ರವೇಶ ಸೂಕ್ತ ಅಲ್ಲ ಎಂದರು.