ಕಲಬುರಗಿ: ಕೊಲೆ ಆರೋಪಿ ನಜಿಮೋದ್ದಿನ್ ಹತ್ಯೆ ಪ್ರಕರಣ: ಫರಹತ್ತಬಾದ್ ಠಾಣೆಯಲ್ಲಿ 8 ಜನರ ವಿರುದ್ಧ FIR
ಕಲಬುರಗಿ : ಕಲಬುರಗಿ ತಾಲೂಕಿನ ಫಿರೋಜಾಬಾದ್ ಬಳಿ ಕೊಲೆ ಆರೋಪಿ ನಜಮೋದ್ದಿನ್ ಬರ್ಬರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫರಹತ್ತಬಾದ್ ಪೊಲೀಸ್ ಠಾಣೆಯಲ್ಲಿ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ.. ಈ ಬಗ್ಗೆ ಜೂ7 ರಂದು ಮಧ್ಯಾನ 1 ಗಂಟೆಗೆ ಪೊಲೀಸರು ಮಾಹಿತಿ ನೀಡಿದ್ದಾರೆ.. ಗಜಾನನ ದೇಶಪಾಂಡೆ, ಸಮೀರ್, ಅಖಿಲ್, ರಶೀದ್, ಆರ್ಯಾ, ಉಮರ್, ಸದ್ದಾಂ, ಶಕೀಲ್ ಸೇರಿದಂತೆ ಎಂಟು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇನ್ನೂ 2024 ರಲ್ಲಿ ರೌಡಿಶೀಟರ್ ಖಲೀಲ್ ಬರ್ಬರ ಹತ್ಯೆ ಘಟನೆಗೆ ಸಂಬಂಧಿಸಿದಂತೆ ಈ ಆರೋಪಿಗಳು ರಿವೆಂಜ್ ತೆಗೆದುಕೊಂಡಿರೋ ಆರೋಪ ಕೇಳಿಬಂದಿದೆ.