ಕೋಲಾರ: ಹಳ್ಳಕೊಳ್ಳಗಳಿಂದ ತುಂಬಿರುವ ನಗರದ ಬೈಪಾಸ್ ಬ್ರಿಡ್ಜ್ ಬಳಿಯ ರಸ್ತೆಯ ಬಗ್ಗೆ ಅಧಿಕಾರಿಗಳೇ ಗಮನಿಸಿ:ಸಾರ್ವಜನಿಕರ ಆಗ್ರಹ
Kolar, Kolar | Oct 5, 2025 ಮಳೆ ನೀರು ಹಾಗೂ ಹಳ್ಳಗಳಿಂದ ತುಂಬಿರುವ ಕೋಲಾರ ನಗರದ ಬೈಪಾಸ್ ಬ್ರಿಡ್ಜ್ ಬಳಿಯ ಸಾಗರ್ ಹೋಟಲ್ ಮತ್ತು ಎಕ್ಸೈಡ್ ಸ್ಪೇರ್ ಪಾರ್ಟ್ಸ್ ಅಂಗಡಿ ಮುಂದಿನ ರಸ್ತೆಯಲ್ಲಿ ಸಂಚರಿಸುವ ವಾಹನ ಚಾಲಕರು ಕೈಕಾಲು ಮುರಿದು ಕೊಂಡು ತಮ್ಮ ಜೀವವನ್ನು ಕೈಯಲ್ಲಿ ಹಿಡಿದು ಓಡಾಡಬೇಕಾದ ಪರಿಸ್ಥಿತಿ ಏರ್ಪಟ್ಟಿದ್ದು ಸಂಭಂದಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಬೇಕೆಂದು ಸಾರ್ವಜನಿಕರು,ಸ್ಥಳೀಯ ವ್ಯಾಪಾರಸ್ಥರು ಹಾಗೂ ವಾಹನ ಚಾಲಕರು ಆಗ್ರಹಿಸಿದ್ದಾರೆ.ಸ್ಥಳೀಯರು ಹಾಗೂ ವಾಹನ ಚಾಲಕರು ಮತ್ತುವ್ಯಾಪಾರಸ್ಥರು ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿ ಕಳೆದ ಮೂರು ನಾಲ್ಕು ವರ್ಷಗಳಿಂದ ಇದೇ ಸಮಸ್ಯೆ ಮಳೆಗಾಲದಲ್ಲಿ ನೀರು ಹಳ್ಳಗಳಲ್ಲಿ ನಿಂತು ಆಳಗೊತ್ತಾಗದೆ ದ್ವಿಚಕ್ರ ವಾಹನ ಚಾಲಕರು ಬಿದ್ದು ಕೈಕಾಲು ಮುರಿದುಕೊಂಡಿದ್ದಾರೆ ಎಂದು ಆಗ್ರಹಿಸಿದ್ರು