2026 ರಾಜ್ಯದಲ್ಲಿ ಚುನಾವಣಾ ವರ್ಷಗಳಾಗಿರುವುದರಿಂದ ರಾಜ್ಯದಲ್ಲಿ ಬೇರು ಬಿಟ್ಟಿರುವ ಭ್ರಷ್ಟ ಪಕ್ಷಗಳ ವಿರುದ್ಧ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರೆಲ್ಲರೂ ರಾಜ್ಯದ ಜನತೆಯೊಂದಿಗೆ ಜೊತೆಗೂಡಿ ಹೋರಾಡಬೇಕು ಹಾಗೂ ಪ್ರಾಮಾಣಿಕರ ಕೈನಲ್ಲಿ ರಾಜಕೀಯ ಕ್ಷೇತ್ರವು ಬರಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಮುಖ್ಯಮಂತ್ರಿ ಚಂದ್ರು ನಗರದ ಯುವಿಸಿಇ ಹಾಲ್ ನಲ್ಲಿ ನಡೆದ ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಕರೆ ನೀಡಿದರು. "ರಾಜ್ಯದಲ್ಲಿ ಮುಂಬರುವ ಜಿಬಿಎ, ಜಿ.ಪಂ–ತಾ. ಪಂ – ಗ್ರಾ ಪಂ , ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳು ಸಕಾಲದಲ್ಲಿ ನಡೆಸಲಾಗದೆ ರಾಜ್ಯವನ್ನು ಆಳಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಸಂವಿಧಾನದ ಅಧಿಕಾರ ವಿಕೇಂದ್ರೀಕರಣ ಸೂತ್ರಕ್ಕೆ ಸಂಪೂರ್ಣ ಕೊಡಲಿ ಪೆಟ್ಟು ನೀಡಿದ್ದಾರೆ.