ಖಾದ್ರಿಪುರ ಮುಖ್ಯರಸ್ತೆಯಲ್ಲಿರುವ ಜಯ ಕರ್ನಾಟಕ ಆಟೋ ನಿಲ್ದಾಣ ವನ್ನು ಅಧಿಕೃತ ಆಟೋ ನಿಲ್ದಾಣವೆಂದು ಘೋಷಣೆ ಮಾಡುವಂತೆ ನಗರಸಭೆ ಆಯುಕ್ತರಿಗೆ ಮನವಿ ಕೋಲಾರ : ಕೋಲಾರ ನಗರಸಭಾ ವ್ಯಾಪ್ತಿಯ ವಾರ್ಡ್ ನಂ. ೨೪ ರಲ್ಲಿ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಬಳಿ ಕಾರಂಜಿಕಟ್ಟೆ, ಖಾದ್ರಿಪುರ ಮುಖ್ಯರಸ್ತೆಯಲ್ಲಿರುವ ಜಯ ಕರ್ನಾಟಕ ಆಟೋ ನಿಲ್ದಾಣ ವನ್ನು ಅಧಿಕೃತ ಆಟೋ ನಿಲ್ದಾಣವೆಂದು ಘೋಷಣೆ ಮಾಡಬೇಕೆಂದು ತ್ರಿಚಕ್ರ ವಾಹನ ಚಾಲಕರ ಸಂಘದ ವತಿಯಿಂದ ರಾಜ್ಯ ಆಟೋ ಯೂನಿಯನ್ ಅಧ್ಯಕ್ಷ ಕೆ.ವಿ. ಸುರೇಶ್ ಕುಮಾರ್ ಸೂಚನೆಯ ಮೇರೆಗೆ ನಗರಸಭೆ ಆಯುಕ್ತರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.