ಸಮಸ್ಯೆ ಬಗ್ಗೆ ಗಮನಕ್ಕೆ ತಂದರೂ ಬಗೆಹರಿಸದ ಅಧಿಕಾರಿಗಳ ವಿರುದ್ದ ಪ್ರತಿಭಟನೆ ನಗರದ ಟೇಕಲ್ ಮೇಲ್ಸೆತುವೆ ಸಮೀಪ ಶುಕ್ರವಾರ ಜಮಾಯಿಸಿದ ನಿವಾಸಿಗಳು ರಸ್ತೆ ತಡೆದು ಪ್ರತಿಭಟಿಸಿದರು. ನಗರಸಭೆ ಅಧಿಕಾರಿಗಳು, ಸ್ಥಳಿಯ ಸದಸ್ಯ ಹಾಗೂ ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ಸುಮಾರು ಅರ್ದ ತಾಸಿಗೂ ಅಧಿಕ ಕಾಲ ಪ್ರತಿಭಟನೆ ನಡೆಸಿದ ಹಿನ್ನಲೆಯಲ್ಲಿ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ನಗರದ ಚೌಡೇಶ್ವರಿ ನಗರ ಬಡಾವಣೆಯ ಆಸುಪಾಸಿನಲ್ಲಿ ಬೆಂಗಳೂರು&ಚೆನ್ನೆ$ ಹೆದ್ದಾರಿ ನಿರ್ಮಾಣ ಮಾಡಲಾಗಿದ್ದು, ರಾಜಕಾಲುವೆಗಳು ಮುಚ್ಚಿ ಹೋಗಿವೆ. ಯುಜಿಡಿ ಸಹ ಹದಗೆಟ್ಟಿದ್ದು ಸರಿಪಡಿಸಬೇಕು ಎಂದು ಹಲವು ಭಾರಿ ನಗರಸಭೆಗೆ ಮನವಿ ಸಲ್ಲಿಸಿದ್ದು, ಅಧಿಕಾರಿಗಳು, ಜನಪ್ರತಿನಿ