ಹುಮ್ನಾಬಾದ್: ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾದ ಎಂ ಎಲ್ ಸಿ ಗಳು ಸಮಸ್ಯೆಗಳಿಗೆ ಸ್ಪಂದಿಸಿಲ್ಲ: ನಗರದಲ್ಲಿ ಶಿಕ್ಷಣ ತಜ್ಞ ಶಿವಶಂಕರ ತರನಳ್ಳಿ ಆರೋಪ
ಈ ಭಾಗದಿಂದ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾದ ರಾಜಕಾರಣಿಗಳು ರಾಜಕೀಯ ನಾಯಕರಾದರೆ ಹೊರತು ಶಿಕ್ಷಕರ ಜ್ವರಂತ ಸಮಸ್ಯೆಗಳಿಗೆ ಸ್ಪಂದಿಸಿಲ್ಲ ಎಂದು ಶಿಕ್ಷಣ ತಜ್ಞ ಶಿವಶಂಕರ್ ತರನಳ್ಳಿ ಆರೋಪ ಮಾಡಿದರು. ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ನಗರದ ನಗರೇಶ್ವರ ಶಾಲೆಗೆ ಬುಧವಾರ ಮಧ್ಯಾಹ್ನ 1:30 ಕ್ಕೆ ಭೇಟಿ ನೀಡಿ, ಶಿಕ್ಷಕರ ವಿವಿಧ ಸಮಸ್ಯೆ ಆಲಿಸಿ ಈ ಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧಿಸಬೇಕು ಎಂದರು.