ಸಿಸಿ ರಸ್ತೆ ಕಾಮಗಾರಿ ಪರಿಶೀಲನೆ ನಡೆಸಿದ ಶಾಸಕ ಕೆ ವೈ ನಂಜೇಗೌಡ ಮಾಲೂರು ನಗರದ ವಾರ್ಡ್ ನಂ. 1ರ ಜೆ ಜೆ ನಗರದಲ್ಲಿ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾಗಿದ್ದ ನೂತನ ಸಿಸಿ ರಸ್ತೆ ಕಾಮಗಾರಿಯು ಪೂರ್ಣಗೊಂಡ ಹಿನ್ನೆಲೆ, ಸ್ಥಳಕ್ಕೆ ಮಾಲೂರು ಶಾಸಕರು ಹಾಗೂ ಕೋಮುಲ್ ಅಧ್ಯಕ್ಷರಾದ ಕೆ. ವೈ. ನಂಜೇಗೌಡ ರವರು ಶನಿವಾರ ಶನಿವಾರ ಸಂಜೆ 5 ಗಂಟೆಯಲ್ಲಿ ಭೇಟಿ ನೀಡಿ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಮಾಲೂರು ನಗರದ ಸಮಗ್ರ ಅಭಿವೃದ್ಧಿಗೆ ನಾವು ಬದ್ಧರಾಗಿದ್ದು, ಪ್ರತಿಯೊಂದು ವಾರ್ಡ್ನಲ್ಲೂ ಮೂಲಭೂತ ಸೌಕರ್ಯಗಳನ್ನು ಹಂತ ಹಂತವಾಗಿ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು