ಬೆಂಗಳೂರು ಉತ್ತರ: ಪುದುಚೇರಿಯಲ್ಲಿ ಗಾಡಿ ಖರೀದಿಸಿ, ರಾಜ್ಯಕ್ಕೆ ತೆರಿಗೆ ವಂಚನೆ ಕುರಿರು ಶಾಸಕ ವಿಠಲ ಕಟಕದೊಂಡ ಸ್ಪಷ್ಟನೆ
ಕಾಂಗ್ರೆಸ್ ಶಾಸಕ ವಿಠಲ ಕಟಕದೊಂಡ ವಿರುದ್ದ ಗಂಭೀರ ಆರೋಪ ಕೇಳಿ ಬಂದಿದ್ದು, ಪುದುಚೇರಿಯಲ್ಲಿ ಕಾರು ಖರೀದಿಸಿ ರಾಜ್ಯಕ್ಕೆ ತೆರಿಗೆ ವಂಚನೆ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇವತ್ತು ಬೆಂಗಳೂರಿನಲ್ಲಿ ಕಮಿಟಿ ಮೀಟಿಂಗ್ ಇತ್ತು, ನಾನು ಆ ಸುದ್ದಿಯನ್ನ ಟಿವಿಗಳಲ್ಲಿ ನೋಡಿದೆ. ಆ ಗಾಡಿ ನಂದಲ್ಲ, ನಮ್ಮ ಗಾಡಿ ಅಪಘಾತವಾಗಿತ್ತು. ಹಾಗಾಗೀ ಆ ಗಾಡಿಯಲ್ಲಿ ಓಡಾಡಿದೆ, ನಾನು ಟ್ಯಾಕ್ಸ್ ತಪ್ಪಿಸಿ ಓಡಾಡಿಲ್ಲ. ಆ ಗಾಡಿಯಲ್ಲಿ ಕುಳಿತದ್ದೇ ತಪ್ಪಾಯ್ತು? ಪಾಸ್ ನಂದೇ ಹಾಕಿದ್ದೆ. ಯಾಕೆಂದ್ರೆ ಶಾಸಕ ಇರೋದ್ರಿಂದ ಪಾಸ್ ನಂದೆ ಇತ್ತು. ಭೀಮಾ ನದಿ ನಮ್ಮ ಕ್ಷೇತ್ರದಲ್ಲಿ ಬರುತ್ತೆ ಅಲ್ಲಿ ಹೋಗಕ್ಕೆ ನಾನು ಗಾಡಿ ಬಳಸಿದ್ದೆ.