ಚಾಮರಾಜನಗರ: ತಾಲೂಕಿನ ಹೆಗ್ಗೊಠಾರ ಗ್ರಾಮದ ಪುಟ್ಟಯ್ಯ ಎಂಬ ರೈತರಿಗೆ ಸೇರಿದ ಹಸು ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. ಹೆಗ್ಗೋಠಾರ ಸಮೀಪದ ಕಲ್ಪುರ ಗುಡ್ಡದಲ್ಲಿ ಹಸುವನ್ನು ಮೇಯಲು ಹೋಗಿದ್ದ ವೇಳೆಯಲ್ಲಿ ಹಸು ಮೇಲೆ ಏಕಾಏಕಿ ಚಿರತೆಯೊಂದು ಮಾರಣಾಂತಿಕ ದಾಳಿ ನಡೆಸಿದೆ. ಚಿರತೆ ದಾಳಿಗೆ ತೀವೃತರವಾಗಿ ಗಾಯಗೊಂಡ ಹಸುವು ಸ್ಥಳದಲ್ಲಿಯೇ ಹಸು ನೀಗಿದೆ ಸಮೀಪದಲ್ಲಿಯೇ ಇದ್ದ ಕೆಲ ರೈತರು ಚೀರಕೊಂಡ ಕಾರಣ ಚಿರತೆಯು ಗುಡ್ಡದತ್ತ ಪರಾರಿಯಾದ ಘಟನೆ ನಡೆದಿದೆ. ಹಲವು ದಿನಗಳಿಂದ ಕಲ್ಪುರ ಸುತ್ತಾಮುತ್ತ ಹುಲಿ ಧಾಲಿಗೆ ರೈತರು ತತ್ತಿರಿಸಿದ್ರು ಇದೀಗ ಬೆಳಂಬೆಳಗ್ಗೆ ಚಿರತೆ ದಾಳಿ ನಡೆಸಿ ಹಸು ಕೊಂದಿರುವುದು ಸ್ಥಳೀಯರ ಆತಂಕಕ್ಕೆ ಕಾರಣವಾಗಿದೆ