ಶಿವಮೊಗ್ಗ: ವಾಲ್ಮೀಕಿ ನಿಗಮ ಹಗರಣ, ಇಡಿ ದಾಳಿ ಸ್ವಾಗತಾರ್ಹ: ನಗರದಲ್ಲಿ ಶಾಸಕ ಆರಗ ಜ್ಞಾನೇಂದ್ರ
ವಾಲ್ಮೀಕಿ ಅಭಿವೃದ್ಧಿ ನಿಗಮ ಮಂಡಳಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ದಾಳಿ ನಡೆಸಿರುವುದು ಸ್ವಾಗತ ಎಂದು ಶಿವಮೊಗ್ಗ ನಗರದಲ್ಲಿ ಶಾಸಕ ಆರ್ಗಾನಿಂದ ಅವರು ಹೇಳಿದ್ದಾರೆ. ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ವಾಲ್ಮೀಕಿ ನಿಗಮದಲ್ಲಿ ದಲಿತರಿಗೆ ಇಟ್ಟಂತಹ ಹಣವನ್ನು ಹೊಡೆದು ನೀಚ ಕೆಲಸ ಮಾಡಿದ್ದಾರೆ.ಇದಕ್ಕೆ ಎಸ್ಐಟಿ ರಚನೆ ಮಾಡಿ ಮಣ್ಣು ಮುಚ್ಚುವ ಕೆಲಸ ಮಾಡುತ್ತಿದ್ದಾರೆ. ನಾವು ರಾಜ್ಯದ್ಯಂತ ಪ್ರತಿಭಟನೆ ಮಾಡಿದ ಪರಿಣಾಮ ಈಗ ಇಡಿ ಬಂದಿದೆ ಎಂದು ಹೇಳಿದರು.