ಶಿವಮೊಗ್ಗ: 'ನಮ್ಮ ಮನವಿ ಆಲಿಸಿ' ಎಂದು ನಗರದಲ್ಲಿ ಅರಣ್ಯ ಸಚಿವ ಈಶ್ವರ್ ಖಂಡ್ರೆಗೆ ಏರು ಧ್ವನಿಯಲ್ಲಿ ಕೇಳಿದ ರೈತ ನಾಯಕ ಶ್ರೀನಿವಾಸ್
ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ನಮ್ಮ ಮನವಿ ಆಲಿಸಿ ಎಂದು ಏರು ಧ್ವನಿಯಲ್ಲಿ ಹೇಳಿದ ರೈತ ನಾಯಕ ತೀ.ನಾ. ಶ್ರೀನಿವಾಸ್. ಗುರುವಾರ ಶಿವಮೊಗ್ಗ ನಗರದ ಅರಣ್ಯ ಭವನದಲ್ಲಿ ಸಭೆಗೆಂದು ಭಾಗವಹಿಸಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲು ರೈತನ ತೀ.ನಾ.ಶ್ರೀನಿವಾಸ್ ಬಂದಿದ್ರು. ಈ ವೇಳೆ ಸಚಿವರು ಮನವಿ ಕೊಡಿ ಎಂದು ಕೇಳಿದ್ದಕ್ಕೆ, ರೈತನಾಯಕ ಏರು ಧ್ವನಿಯಲ್ಲಿ ನಮ್ಮ ಮನವಿ ಆಲಿಸಿ ಎಂದು ಹೇಳಿದ್ದಾರೆ. ಕೂಡಲೇ ರೈತ ನಾಯಕನನ್ನು ಪೊಲೀಸರು ತಡೆದರು ಸಚಿವರ ಮೇಲೆ ಎದುರೇ ಪೊಲೀಸರ ಮೇಲೆ ರೈತ ನಾಯಕ ಶ್ರೀನಿವಾಸ್ ಗರಂ ಆಗಿದ್ದಾರೆ.