ಮಾಲೂರು: ಕ್ರಮ ಸಂಖ್ಯೆ 1508 ರಲ್ಲಿ ಇರುವ ವಹ್ನಿಕುಲ ಕ್ಷತ್ರಿಯ ಎಂದೇ ಮಾಹಿತಿ ನೀಡಿ: ನಗರದಲ್ಲಿ ಸಮುದಾಯದ ಮುಖಂಡ ಹೂಡಿ ವಿಜಯ್ ಕುಮಾರ್
Malur, Kolar | Sep 14, 2025 ಸೆಪ್ಟೆಂಬರ್ 22 ರಿಂದ ಕರ್ನಾಟಕ ರಾಜ್ಯ ಸರ್ಕಾರವು ಇಡೀ ಕರ್ನಾಟಕ ರಾಜ್ಯದ ಸಮಸ್ತ ಜಾತಿ/ ವರ್ಗಗಳ ಜನಸಂಖ್ಯೆಯನ್ನು ದಾಖಲಿಸಲು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ= 2025ಕ್ಕೆ ಪ್ರಾರಂಭಿಸಲಿದೆ. ಈ ಸಮೀಕ್ಷೆಯಲ್ಲಿ ಕರ್ನಾಟಕ ರಾಜ್ಯಾದ್ಯಂತ ಇರುವ ವಹ್ನಿಕುಲ ಕ್ಷತ್ರಿಯ ಒಟ್ಟು ಜನಸಂಖ್ಯೆಯನ್ನು ನಿರ್ಧರಿಸಿ, ಈ ಜನಸಂಖ್ಯೆಗೆ ಅನುಗುಣವಾಗಿ ಮುಂದಿನ ದಿನಗಳಲ್ಲಿ ಶಿಕ್ಷಣಕ್ಕಾಗಿ, ಉದ್ಯೋಗಕ್ಕಾಗಿ,ರಾಜಕೀಯಕ್ಕಾಗಿ ವಹ್ನಿಕುಲ ಕ್ಷತ್ರಿಯರಿಗೆ ಮೀಸಲಾತಿ ಹಂಚಿಕೆಯನ್ನು ಮಾಡಲಾಗುತ್ತದೆ. ಆದ್ದರಿಂದ ಕ್ರಮ ಸಂಖ್ಯೆ 1508 ರಲ್ಲಿ ಇರುವ ವಹ್ನಿಕುಲ ಕ್ಷತ್ರಿಯ ಎಂದೇ ಮಾಹಿತಿ ನೀಡಿ ಎಂದು ಸಮುದಾಯದ ಮುಖಂಡ ಹೂಡಿ ವಿಜಯ್ ಕುಮಾರ್ ತಿಳಿಸಿದರು. ನಗರದ ಖಾಸಗಿ ಕಾಲೇಜಿನಲ್ಲಿ ಭಾನುವಾರ ಸಮುದಾಯದ ಮುಖಂಡರೊಂದಿಗೆ ಸ ಚರ್ಚೆ ನಡೆಸಿದರು