ಬೆಂಗಳೂರು ಉತ್ತರ: ಕಾಂಗ್ರೆಸ್ ಸರ್ಕಾರದ ಕಮಿಷನ್ ಕುರಿತು ಕಂಟ್ರಾಕ್ಟರ್ ಅಸೋಸಿಯೇಷನ್ ಪತ್ರ ಬರೆದಿದೆ: ನಗರದಲ್ಲಿ ಆರ್.ಅಶೊಕ್
ವಿಪಕ್ಷ ನಾಯಕ ಆರ್ ಅಶೋಕ್ ಅವರು ಮಲ್ಲೇಶ್ವರಂನಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ಕರ್ನಾಟಕ ಸರ್ಕಾರ ಭ್ರಷ್ಟ ಸರ್ಕಾರ ಅನ್ನೋದು ಕಂಟ್ರಾಕ್ಟರ್ ಅಸೋಸಿಯೇಷನ್ ಬರೆದಿರೋ ಪತ್ರವೇ ಸಾಕ್ಷಿ.ಕಾಂಗ್ರೆಸ್ ಸರ್ಕಾರ 60% ಸರ್ಕಾರ ಅಂತ ನಾವು ಆರೋಪ ಮಾಡ್ತಿದ್ದೆವು. ಸಿದ್ದರಾಮಯ್ಯ ಸಾಕ್ಷಿ ಕೇಳ್ತಿದ್ರು. ಬಿಜೆಪಿ ಮೇಲೆ 40% ಆರೋಪ ಮಾಡಿದ್ರು. ಈಗ ಕಂಟ್ರಾಕ್ಟರ್ ಅಸೋಸಿಯೇಷನ್ ಸಿಎಂಗೆ ಪತ್ರ ಬರೆದಿದ್ದಾರೆ. ಗುತ್ತಿಗೆ ಬಾಕಿ ಹಣವನ್ನ ಮೂರು ತಿಂಗಳಿಗೊಮ್ಮೆ ಬಿಡುಗಡೆ ಮಾಡ್ತಿದ್ದಾರೆ. ನಮ್ಮ ಸರ್ಕಾರ ಬಂದ್ರೆ ಕಮೀಷನ್ ಇಲ್ಲದೆ ಗುತ್ತಿಗೆದಾರ ಹಣ ಬಿಡುಗಡೆ ಮಾಡೋದಾಗಿ ವಿಪಕ್ಷದಲ್ಲಿ ಇದ್ದಾಗ ಹೇಳಿದ್ರು. 60% ಸರ್ಕಾರ ಅಂತ ಹೇಳಿ ಸಹಿ ಕೂಡ ಹಾಕಿದ್ದಾರೆ. ಬಿಜೆಪಿ ಸರ್ಕಾರಕ್ಕಿಂತ ಡಬಲ್ ಅಂತ ಹೇಳಿದ್ದು,