ಹಾಸನ: ಮೊಸಳೆ ಹೊಸಳ್ಳಿ ಬಳಿ 10 ಜನರ ಬಲಿ ಪಡೆದ ರಸ್ತೆಗೆ ಹಂಪ್ಸ್ ಹಾಕಿಸಲು ಮುಂದಾದ ಅಧಿಕಾರಿಗಳು
Hassan, Hassan | Sep 15, 2025 ಗಣೇಶ ಮೆರವಣಿಗೆ ವೇಳೆ ದುರಂತ ಪ್ರಕರಣ: ಅಪಘಾತ ನಡೆದ ಸ್ಥಳದಲ್ಲಿ ಹಂಪ್ಸ್ ಹಾಕಿಸಲು ಮುಂದಾದ ಅಧಿಕಾರಿಗಳು ಹಾಸನ : ತಾಲೂಕಿನ ಮೊಸಳೆ ಹೊಸಳ್ಳಿ ಬಳಿ ಗಣೇಶ ಮೆರವಣಿಗೆ ವೇಳೆ ಏಕಾಏಕಿ ಟ್ರಕ್ ಹರಿದ ಪರಿಣಾಮ 10 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ,ಸ್ಥಳೀಯರ ಆಕ್ರೋಶಕ್ಕೆ ಮಣಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೊಸಳೆಹೊಸಳ್ಳಿ ಗ್ರಾಮದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 373 ರಲ್ಲಿ ಸಣ್ಣದಾದ ಹಂಪ್ಗಳ ಅಳವಡಿಕೆ ಮಾಡಿದ್ದಾರೆ.ಚತುಷ್ಪಥ ರಸ್ತೆಯ ಎರಡು ಕಡೆ ಆರು-ಆರು ಸಣ್ಣದಾದ ಹಂಪ್ಗಳನ್ನು ಹಾಕಲಾಗಿದೆ. ಈ ರಸ್ತೆಯಲ್ಲಿ ಹಂಪ್ಸ್ ಇಲ್ಲದ ಕಾರಣ ವೇಗವಾಗಿ ವಾಹನಗಳು ಬಂದು ಅಪಘಾತಗಳು ಸಂಭವಿಸುತ್ತಿರುವ