ಮದ್ದೂರು: ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಒತ್ತಾಯ
Maddur, Mandya | Sep 15, 2025 ಮದ್ದೂರು ತಾಲ್ಲೂಕು ಅಣ್ಣೂರು ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಜರುಗಿತು. ಸಭೆಯಲ್ಲಿ ಎಂಪಿಸಿಎಸ್ ಸರ್ವ ಸದಸ್ಯರು ಅಣ್ಣೂರು ಹಾಲುಉತ್ಪಾದಕರ ಸಹಕಾರ ಸಂಘದಿಂದ ನಿವೇಶನ ಖರೀದಿಸಿ ಸಮುದಾಯ ಭವನ ನಿರ್ಮಾಣ ಮಾಡಬೇಕೆಂದು ಒಕ್ಕೋರಲಿನಿಂದ ಒತ್ತಾಯಿಸಿದರು. ಅಣ್ಣೂರು ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ 70 ಲಕ್ಷ ಹಣವಿದ್ದು, ಸದರಿ ಹಣದಲ್ಲಿ ನಿವೇಶನ ಖರೀದಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಿವೇಶನ ದುಭಾರಿಯಾಗಲಿದೆ. ಹಾಗಾಗಿ ಕೂಡಲೇ ನಿವೇಶನ ಖರೀದಿ ಮಾಡಿ ಸಮುದಾಯ ಭವನ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಗೌಡ ಜಮಾ ಖರ್ಚು ವರದಿ ವಾಚಿಸಿ ಸಂಘವು 2024-25ನೇ ಸಾಲಿನಲ್ಲಿ