ಕೋಲಾರ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ನಗರದ ಪ್ರವಾಸಿ ಮಂದಿರ ಬಳಿ ಬೈಕ್ ಜಾಥಾಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಡಾ.ಎಂ ಆರ್ ರವಿ
Kolar, Kolar | Sep 14, 2025 ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಲ್ಲಿ ಸಂವಿಧಾನದ ಕುರಿತು ಅರಿವು ಮೂಡಿಸಲು ಕೋಲಾರದಿಂದ ಬೆಂಗಳೂರಿಗೆ ಹೊರಟ ಬೈಕ್ ಜಾಥಾಕ್ಕೆ ಭಾನುವಾರ ನಗರದ ಪ್ರವಾಸಿ ಮಂದಿರ ಬಳಿ ಜಿಲ್ಲಾಧಿಕಾರಿ ಡಾ. ಎಂ ಆರ್ ರವಿ, ಎಸ್ಪಿ ನಿಖಿಲ್ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು. ನಗರದಿಂದ ಬೆಂಗಳೂರಿಗೆ ಬೈಕ್ ಮೂಲಕ ತೆರಳಿದ 10 ಬೈಕ್ ರೈಡರ್ಸ್ ಜೊತೆಗೆ ಡಿಸಿ ಮತ್ತು ಎಸ್ಪಿ ಅವರು ಕೂಡ ರಾಷ್ಟ್ರೀಯ ಹೆದ್ದಾರಿ ರಸ್ತೆ ಮೂಲಕ ಕೊಂಡರಾಜನಹಳ್ಳಿ ತನಕ ಬೈಕ್ ಗಳಲ್ಲಿ ತೆರಳಿ ಬಿಟ್ಟು ಬಂದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಭಾರತವು ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಸಂವಿಧಾನ ಹೊಂದಿರುವ ರಾಷ್ಟ್ರವಾಗಿದೆ. ಪ್ರತಿಯೊಬ್ಬರಿಗೂ ಹಕ್ಕು ಮತ್ತು ಕರ್ತವ್ಯಗಳನ್ನು ಒದಗಿಸಿದೆ ಎಂದ್ರು