ಮಾಲೂರು ಮೂಲದ ವಿದ್ಯಾರ್ಥಿಗಳ ಗಣಿತ ಸಾಧನೆಗೆ ಕರ್ನಾಟಕ ಸರ್ಕಾರದ ಮನ್ನಣೆ ಕೋಲಾರ : ಗಣಿತದಲ್ಲಿನ ಅಸಾಮಾನ್ಯ ಮತ್ತು ವಿಶ್ವ ದಾಖಲೆಯ ಸಾಧನೆಗಾಗಿ ಮಲೂರು ಮೂಲದ ಯುವ ಪ್ರತಿಭೆಗಳಾದ ಮಾಸ್ಟರ್ ವಿಭವಿ ಸಿ. ಗೌಡ ಮತ್ತು ಮಾಸ್ಟರ್ ಪ್ರಣವ್ ಸಿ. ಗೌಡ ಅವರಿಗೆ ಇಂದು ಕೋಲಾರ ಜಿಲ್ಲಾಧಿಕಾರಿ ಕಚೇರಿಯಿಂದ ಗೌರವಪೂರ್ವಕವಾಗಿ ’ಪ್ರಶಂಸಾ ಪತ್ರ’ ನೀಡಿ ಗೌರವಿಸಲಾಯಿತು. ಜಿಲ್ಲಾಧಿಕಾರಿ ಗಳಾದ ಡಾ.ಎಂ.ಆರ್.ರವಿ ಅವರು ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಂಸಾ ಪತ್ರ ನೀಡಿ ಗೌರವಿಸಿದರು. ಮಾಸ್ಟರ್ ವಿಭವಿ ಸಿ. ಗೌಡ: ಇವರು ಇತ್ತೀಚೆಗೆ ಮಲೂರಿನಲ್ಲಿ ನಡೆದ ’ವರ್ಲ್ಡ್ ರೆಕಾರ್ಡ್ ಕ್ವೆಸ್ಟ್ ಇನ್ ಅಡ್ವಾನ್ಸ್ಡ್ ಮೆಂಟಲ್ ಮ್ಯಾಥ್ ಕ್ಯಾಲ್ಕುಲೇಷನ್ ? ೨೦೨೫’ ಸ್ಪರ್ಧೆಯಲ್ಲಿ ದೇಶಾದ್ಯಂತದ ೨೦೦ಕ್ಕೂ ಹೆಚ್ಚು ದೇಶಗಳ ಮ