ಜಮಖಂಡಿ: ಬಾಗಲಕೋಟೆ-ಕುಡಚಿ ರೈಲು ಮಾರ್ಗದ ಕಾಮಗಾರಿ ಪೂರ್ಣವಾಗದಿದ್ದರೆ ಉಗ್ರ ಹೋರಾಟ,ನಗರದಲ್ಲಿ ಹೋರಾಟಗಾರ ಕುತುಬುದ್ದೀನ ಖಾಜಿ
ಜಮಖಂಡಿ ನಗರದ ತಾಲೂಕಾಡಳಿತ ಸೌಧದ ಮುಂಭಾಗದಲ್ಲಿ ರೈಲ್ವೆ ಹೊರಾಟ ಸಮಿತಿ ರಾಜ್ಯಾಧ್ಯಕ್ಷ, ಸುದ್ದಿಗಾರರೊಂದಿಗೆ ಮಾತನಾಡಿ ಬಾಗಲಕೋಟ ಕುಡಚಿ ರೈಲ್ವೆ ಕಾಮಗಾರಿ ಮುಧೋಳದ ವರೆಗೆ ಆಗಿದ್ದು ಅಲ್ಲಿಂದ ಜಮಖಂಡಿ ವರೆಗೆ ಆಗಬೇಕೆಂದು ಆಗ್ರಹಿಸಿದರು.ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಸಚಿವರುಗಳು ಸರ್ಕಾರಕ್ಕೆ ಒತ್ತಾಯಿಸಿ ಕಾಮಗಾರಿಯನ್ನು ಪ್ರಾರಂಭಿಸಬೇಕು, ಇಲ್ಲವಾದಲ್ಲಿ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.