ಉಡುಪಿ: ನಗರದ ಮಲ್ಪೆ ವಡ ಭಾಂಡೇಶ್ವರ ಕಡಲತೀರದಲ್ಲಿ ಮಹಾಲಯ ಅಮವಾಸ್ಯೆಯ ಅಂಗವಾಗಿ ಪಿಂಡಪ್ರದಾನ ಸಮುದ್ರ ಸ್ನಾನ ನಡೆದಿದೆ
Udupi, Udupi | Sep 21, 2025 ಇಂದು ಮಹಾಲಯ ಅಮಾವಾಸ್ಯೆ.. ಜೊತೆಗೆ ಪಾರ್ಶ್ವ ಸೂರ್ಯ ಗ್ರಹಣ. ಇಂತಹ ದಿನ ಸಾವಿರ ವರ್ಷಕ್ಕೊಮ್ಮೆ ಬರುತ್ತದೆ ಎಂಬ ನಂಬಿಕೆ ಇದೆ. ಉಡುಪಿಯ ಮಲ್ಪೆ ವಡಭಾಂಡೇಶ್ವರ ಕಡಲ ತೀರದಲ್ಲಿ ಪಿಂಡಪ್ರದಾನ ತಿಲತರ್ಪಣ ಸಮುದ್ರ ಸ್ನಾನ ಆಚರಿಸಲಾಗುತ್ತಿದೆ. ಸಾವಿರಾರು ಸಂಖ್ಯೆಯಲ್ಲಿ ಜನ ಪಿತೃಗಳಿಗೆ ತರ್ಪಣ ನೀಡುತ್ತಿದ್ದಾರೆ. ನದಿಗಳೆಲ್ಲದರ ಸಂಗಮ ಸಮುದ್ರದಲ್ಲಿ ಪುಣ್ಯ ಸ್ನಾನ ಮಾಡಿ ಅಗಲಿದ ಆತ್ಮಗಳಿಗೆ ಶಾಂತಿ ಕೋರುತ್ತಿದ್ದಾರೆ. ಈ ಬಾರಿ ಹೊರ ಜಿಲ್ಲೆಯ ಹೆಚ್ಚಿನ ಭಕ್ತರು ಈ ಧಾರ್ಮಿಕ ವಿಧಿಯಲ್ಲಿ ಭಾಗಿಯಾಗಿದ್ದಾರೆ.