ಜಮಖಂಡಿ: ನವಂಬರ್ ೭ ರಂದು ಲಿಂ.ಮ.ನಿ.ಪ್ರ.ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೆ ,ನಗರದಲ್ಲಿ ಓಲೇಮಠದ ಶ್ರೀ ಆನಂದ ದೇವರು
ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಗರದ ಒಲೆಮಠದಲ್ಲಿ ನವಂಬರ್ ೭ ರಂದು ಲಿಂ.ಮ.ನಿ.ಪ್ರ.ಡಾ.ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಶ್ರದ್ಧಾ ಭಕ್ತಿ ಗಳಿಂದ ಜರುಗುವದು ಎಂದು ಶ್ರೀ ಆನಂದ ದೇವರು ತಿಳಿಸಿದ್ದಾರೆ.ನಗರದ ಓಲೆಮಠದ ಸಭಾಭವನದಲ್ಲಿ ಕಡಕೋಳ,ಕಂಕಣವಾಡಿ ಹಾಗೂ ಜಮಖಂಡಿ ಹಿರಿಯರ ಹಾಗೂ ಅಕ್ಕನ ಬಳಗದ ತಾಯಂದಿರ ಸಮ್ಮುಖದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಲಿಂ. ಶ್ರೀ ಮ.ನಿ.ಪ್ರ. ಡಾ. ಅಭಿನವ ಕುಮಾರ ಚೆನ್ನಬಸವ ಮಹಾಸ್ವಾಮಿಗಳ ಪ್ರಥಮ ವರ್ಷದ ಪುಣ್ಯ ಸ್ಮರಣೋತ್ಸವದ ನಿಮಿತ್ಯವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಿದ್ದಾಗಿ ತಿಳಿಸಿದ್ದಾರೆ.