ಬೆಂಗಳೂರು ಉತ್ತರ: ಸಂವಿಧಾನವನ್ನ ಸರಿಯಾಗಿ ಪ್ರತಾಪ್ ಸಿಂಹ, ಬಿಜೆಪಿ ನಾಯಕರು ಓದಲ್ಲಿ: ನಗರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್
ಪ್ರತಾಪ್ ಸಿಂಹ ಅರ್ಜಿ ವಜಾ ಗೊಳಿಸಿ ವಿಚಾರಕ್ಕೆ ಸಂಬಂಧಿಸಿ ವಿಧಾನಸೌಧದಲ್ಲಿ ಸೋಮವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿದ ಡಿಸಿಎಂ ಡಿಕೆ.ಶಿವಕುಮಾರ್ ಅವರು, ಅದು ಅವರ ಇಂಡಿವಿಜುವಲ್ ಅಭಿಪ್ರಾಯ. ಇದು ಪ್ರಜಾಪ್ರಭುತ್ವದ ವ್ಯವಸ್ಥೆ. ಬ್ಯಾಲೆಟ್ ನಲ್ಲಿ ಬಂದಿರೋ ಸರ್ಕಾರ ಇದು. ಇವತ್ತು ನಾವು ಬ್ಯಾಲೆಟ್ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ನಮ್ಮ ಹಕ್ಕು ನಮ್ಮ ಮತ ಅಂತ ಹೇಳುತ್ತಿದ್ದೇವೆ. ಸಂವಿಧಾನದ ಬದ್ದವಾಗಿರುವ ನಿರ್ಧಾರಗಳನ್ನ ನಾವು ಮಾಡಿಕೊಂಡಿದ್ದೇವೆ. ಸಂವಿಧಾನದವನ್ನ ಸರಿಯಾಗಿ ಪ್ರತಾಪ್ ಸಿಂಹ ಹಾಗೂ ಬಿಜೆಪಿ ನಾಯಕರೆಲ್ಲ ಓದಲಿ ಎಂದರು.